Job Description: * ಪ್ರಸ್ತುತ ಅಮೇರಿಕದ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಜೋ ಬೈಡನ್ ಅವರ ಸರ್ಕಾರವು ತನ್ನ ಉನ್ನತ ಹುದ್ದೆಗಳಲ್ಲಿ ಭಾರತೀಯ ಮೂಲದ ಅಮೇರಿಕನ್ ಪ್ರಜೆಗಳಿಗೆ ಸ್ಥಾನವನ್ನು ನೀಡುತ್ತಾಬಂದಿದೆ, ಇದೀಗ ಮತ್ತೇ ಅಮೆರಿಕದ ಉನ್ನತ ಹುದ್ದೆಗೆ ಗೌತಮ್ ರಾಘವನ್'ನ್ನು ನೇಮಕ ಮಾಡಿದೆ. * ಅಧ್ಯಕ್ಷ ಜೋ ಬೈಡನ್ ಭಾರತೀಯ ಮೂಲದ ಗೌತಮ್ ರಾಘವನ್ರನ್ನು ವೈಟ್ಹೌಸ್ನ ಅಧ್ಯಕ್ಷೀಯ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ, ಈ ಮೊದಲು ಕ್ಯಾಥಿ ರಸೆಲ್ ಅವರು ವೈಟ್ಹೌಸ್ನ ಅಧ್ಯಕ್ಷೀಯ ಸಿಬ್ಬಂದಿ ಮುಖ್ಯಸ್ಥರಾಗಿದ್ದರು, ಇದೀಗ ಅವರನ್ನು ಯುನಿಸೆಫ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಕ ಮಾಡಿ ವಿಶ್ವಸಂಸ್ಥೆ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಅವರು ಆದೇಶವನ್ನು ಹೊರಡಿಸಿದ್ದಾರೆ. * ಈ ಮೊದಲು ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ ಸಂಧರ್ಭದಲ್ಲಿ ಗೌತಮ್ ರಾಘವನ್ ಅವರು ಎಲ್ಜಿಬಿಟಿಕ್ಯೂ ಹಾಗೂ ಏಷ್ಯನ್ ಅಮೆರಿಕನ್, ಫೆಸಿಪಿಕ್ ಐಲ್ಯಾಂಡರ್ ಸಮುದಾಯಗಳಿಗೆ ಸಂಪರ್ಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. * ಭಾರತೀಯ ಮೂಲದ ಗೌತಮ್ ರಾಘವನ್ ಅವರು US ಸ್ಟ್ಯಾಂಡ್ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದುಕೊಂಡಿದ್ದಾರೆ.