Job Description: * ಸೀರಂ ಇನ್ಸ್ಟಿಟ್ಯೂಟ್ ಅಫ್ ಇಂಡಿಯಾ (SII) ಉತ್ಪಾದಿಸಿರುವ ಕೋವಿಡ್-19 ಲಸಿಕೆ ನೊವೊವ್ಯಾಕ್ಸ್ನ 2 ಕೋಟಿ ಡೋಸ್ ಅನ್ನು ಇಂಡೋನೇಷ್ಯಾಗೆ ರಫ್ತು ಮಾಡಲು ಭಾರತ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. * ಭಾರತದಲ್ಲಿನ ಜನರಿಗೆ ಲಸಿಕೆ ನೀಡಲು ಕೊರತೆ ಎದುರಾದ ಬಳಿಕ ಏಪ್ರಿಲ್ನಲ್ಲಿ ಲಸಿಕೆ ರಫ್ತು ಮಾಡುವುದನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ರಫ್ತು ಮಾಡಲು ಭಾರತ ಸರ್ಕಾರ ಅನುಮೋದಿಸಿದೆ, ಮತ್ತು ಮುಂದಿನ ತಿಂಗಳಿನಿಂದ ಸರಬರಾಜು ಕಾರ್ಯ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. * ಇದರ ಜೊತೆಗೆ ಭಾರತದಲ್ಲಿ ಅನುಮೋದನೆ ಪಡೆದಿರುವ ಆಸ್ಟ್ರಾಜೆನಿಕಾ ಕಂಪನಿಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಲಸಿಕೆಯ 1 ಕೋಟಿ ಡೋಸ್ ರಫ್ತು ಮಾಡಲು ಭಾರತ ಸರ್ಕಾರ ಅನುಮತಿ ನೀಡಿರುವುದಾಗಿ ಮೂಲಗಳು ತಿಳಿಸಿವೆ. * ತಮ್ಮ ಕುಟುಂಬದ ಒಡೆತನದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII)ವು ನವೆಂಬರ್ ಮತ್ತು ಡಿಸೆಂಬರ್ನಲ್ಲಿ 3 ರಿಂದ 4 ಕೋಟಿ ಡೋಸ್ ಲಸಿಕೆಯನ್ನು ರಫ್ತು ಮಾಡಲಿದ್ದೇವೆ. * ಭಾರತದಲ್ಲಿ ಲಸಿಕೆ ಬೇಡಿಕೆ ಮುಗಿದ ಬಳಿಕ ಜನವರಿಯಲ್ಲಿ ಮತ್ತಷ್ಟು ಪ್ರಮಾಣದ ಲಸಿಕೆ ರಫ್ತಿಗೆ ಯೋಜಿಸಲಾಗಿದೆ ಎಂದು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (SII) CEO ಆದ ರಾಯಿಟರ್ಸ್ ತಿಳಿಸಿದ್ದಾರೆ.