Job Description: * ಪ್ರಸ್ತುತ ಕೋವಿಡ್-19 ಲಸಿಕಾ ಅಭಿಯಾನವು ಆರಂಭವಾದ 9 ತಿಂಗಳಿನಲ್ಲಿ ಭಾರತ ದೇಶವು ಸಾರ್ವಜನಿಕರಿಗೆ 100 ಕೋಟಿ ಡೋಸ್ಗಳನ್ನು ನೀಡಿ ದಾಖಲೆಯನ್ನು ಬರೆದಿದೆ. * ಇದಕ್ಕೂ ಮೊದಲು ಚೀನಾ ದೇಶವು 100 ಕೋಟಿ ಡೋಸ್ ಕೋವಿಡ್-19 ಲಸಿಕೆಯನ್ನು ನೀಡಿತ್ತು, ಇದೀಗ ಭಾರತವು ಕೂಡ ಈ ದಾಖಲೆಯನ್ನು ಸರಗಟ್ಟಿದೆ. * ಪ್ರಸ್ತುತ 100 ಕೋಟಿ 30 ಲಕ್ಷ ಡೋಸ್ಗಳನ್ನು ನೀಡಿದೆ ಎಂದು ಕೋವಿನ್ ಪೋರ್ಟಲ್ ತಿಳಿದು ಬಂದಿದೆ, ಇದೇ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ರಾಮಮನೋಹರ ಲೋಹಿಯ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಮಾತುಕತೆಯನ್ನು ನಡೆಸಿದರು, ಹಾಗೂ ಎಲ್ಲ ಕೋರನಾ ವಾರಿಯರ್ಸ್'ಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. * ಭಾರತದಲ್ಲಿ ಅತೀ ಹೆಚ್ಚು ಕೋವಿಡ್-19 ಲಸಿಕೆಗಳನ್ನು ನೀಡಿರುವ ರಾಜ್ಯ ಉತ್ತರಪ್ರದೇಶ.