Job Description: * ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಂನ 15,568 ಅಡಿ ಎತ್ತರದ ಟಾಟಾಕೂಟಿ ಪರ್ವತವನ್ನು ಚಿತ್ರದುರ್ಗ ಜಿಲ್ಲೆಯ ಅನ್ನೆಹಾಳ್ ಗ್ರಾಮದ ನಿವಾಸಿಯಾಗಿರುವ ಧನರಾಜ್ ಯಶಸ್ವಿಯಾಗಿ ಏರಿದ್ದಾರೆ. * ಇತ್ತೀಚಿಗೆ ಪರ್ವತಾರೋಹಣ ಸಾಹಸ ಕಾರ್ಯಕ್ಕೆ ಯುವ ಸಬಲೀಕರಣ ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು 38 ಜನರನ್ನು ಆಯ್ಕೆ ಮಾಡಿತ್ತು. * ಜಮ್ಮು ಮತ್ತು ಕಾಶ್ಮೀರದ ಜವಾಹರ್ ಇನ್ಸ್ಟಿಟ್ಯೂಟ್ ಆಫ್ ಮೌಂಟೆನೆರಿಂಗ್ ಅಂಡ್ ವಿಂಟರ್ ಸ್ಪೋರ್ಟ್ಸ್ನಲ್ಲಿ ಧನರಾಜ್ ಅವರು 10 ದಿನ ತರಬೇತಿಯನ್ನು ಪಡೆದುಕೊಂಡಿದ್ದರು. * ಯುವ ಸಾಹಸಿ ಧನರಾಜ್ ಅವರು ಕೇವಲ 23 ಗಂಟೆಯೊಳಗೆ ಈ ಪರ್ವತವನ್ನು ಏರಿದ್ದಾರೆ, ಈ ಮೊದಲು 2019ರಲ್ಲಿ ಧನರಾಜ್ ಅವರು ಜಮ್ಮು ಮತ್ತು ಕಾಶ್ಮೀರದ ಸೋನಾ ಮಾರ್ಗ್ ಪರ್ವತ ಏರುವುದಕ್ಕೆ ಆಯ್ಕೆಯಾಗಿದ್ದರು, ತದನಂತರ 13,500 ಅಡಿ ಎತ್ತರದ ಶಿಖರ ಏರಿದ್ದರು.