Job Description: * ಪ್ರಸ್ತುತ ಅಮೇರಿಕದ ಆಟೋಮೊಬೈಲ್ ಸಂಸ್ಥೆಯಾಗಿರುವ ಫೋರ್ಡ್ ಭಾರತದ ಚೆನ್ನೈ ನಲ್ಲಿರುವ '2' ಉತ್ಪದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧಾರವನ್ನು ಕೈಗೊಂಡಿದೆ. * ಚೆನ್ನೈ ನ ಮರಿಮಲೈ ನಗರದಲ್ಲಿರುವ ಫೋರ್ಡ್ ಸಂಸ್ಥೆಯ ಉತ್ಪದನಾ ಘಟಕವು ಸೆಮಿ ಕಂಡ್ಕ್ಟರ್ ಕೊರತೆಯ ಕಾರಣ ನೀಡಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ, ಅಲ್ಲದೇ 2022 ರ 2ನೇ ತ್ರೈಮಾಸಿಕದಲ್ಲಿ ಈ ಘಟಕವನ್ನು ಸ್ಥಗಿತಗೊಳಿಸುವದಾಗಿ ಫೋರ್ಡ್ ಸಂಸ್ಥೆ ತಿಳಿಸಿದೆ. * ಫೋರ್ಡ್ ಸಂಸ್ಥೆಯ ಈ ನಿರ್ಣಯದಿಂದ ಅಲ್ಲಿನ 2,700 ತಾಂತ್ರಿಕ ವರ್ಗದ ಉದ್ಯೋಗಿಗಳು, ಹಾಗೂ 600 ಮಂದಿ ಇತರ ಸಿಬ್ಬಂದಿಗಳ ಭವಿಷ್ಯ ಅತಂತ್ರವಾಗಿದೆ. * ಫೋರ್ಡ್ ಮೋಟಾರ್ ಕಂಪನಿ ಅಮೆರಿಕದ ಮಿಚಿಗನ್ನ ಡಿಯರ್ಬೋರ್ನ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಹಾಗೂ ಅಮೇರಿಕನ್ ಬಹುರಾಷ್ಟ್ರೀಯ ಆಟೋಮೊಬೈಲ್ ತಯಾರಕ ಸಂಸ್ಥೆಯಾಗಿದೆ. * ಈ ಫೋರ್ಡ ಸಂಸ್ಥೆಯನ್ನು 1903 ರ ಜೂನ್.16ರಂದು ಹೆನ್ರಿ ಫೋರ್ಡ್ ಸ್ಥಾಪಿಸಿದ್ದಾರೆ, ಈ ಕಂಪನಿಯು ಫೋರ್ಡ್ ಬ್ರಾಂಡ್ ಅಡಿಯಲ್ಲಿ ಆಟೋಮೊಬೈಲ್ ಮತ್ತು ವಾಣಿಜ್ಯ ವಾಹನಗಳನ್ನು ಹಾಗೂ ಐಷಾರಾಮಿ ಕಾರುಗಳನ್ನು ಮಾರಾಟ ಮಾಡುತ್ತದೆ.