Job Description: * ಪ್ರಸ್ತುತ ಜಪಾನ್ನ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಶೂಟಿಂಗ್ ಪಿ4 ಮಿಶ್ರ 50 ಮೀ. ಪಿಸ್ತೂಲ್ ಎಚ್1 ವಿಭಾಗದಲ್ಲಿ ಭಾರತೀಯ ಮನೀಶ್ ನರ್ವಾಲ್ ಅವರು ಚಿನ್ನ, ಹಾಗೂ ಸಿಂಗರಾಜ್ ಅದಾನಾ ಬೆಳ್ಳಿ ಪದಕಗಳನ್ನು ಗೆದಿದ್ದಾರೆ. * ಭಾರತೀಯ ಶೂಟರ್ ಮನೀಶ್ ನರ್ವಾಲ್ ಅವರು 218.2 ಪಾಯಿಂಟ್'ಗಳಿಸಿ ಈ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಸಿಂಗರಾಜ್ ಅದಾನಾ ಅವರು 216.7 ಪಾಯಿಂಟ್'ಗಳಿಸಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ, ಈ ಮೊದಲು ಸಿಂಗರಾಜ್ ಅವರು ಪುರುಷರ ಪಿ1 10 ಮೀ. ಏರ್ ಪಿಸ್ತೂಲ್ ಎಸ್ಎಚ್1 ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ, ಒಟ್ಟಾರೆ ಇವರು ಈ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿದ್ದಾರೆ.