Job Description: *ಪ್ರಸ್ತುತ ಚಂಡೀಗಢ ರೈಲು ನಿಲ್ದಾಣಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) 5-ಸ್ಟಾರ್ 'ಈಟ್ ರೈಟ್ ಸ್ಟೇಷನ್' ಪ್ರಮಾಣಪತ್ರವನ್ನು ನೀಡಿದೆ. * ಚಂಡೀಗಢ ರೈಲು ನಿಲ್ದಾಣವು ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ, ಪೌಷ್ಟಿಕ ಆಹಾರವನ್ನು ಒದಗಿಸಿದ್ದಕ್ಕಾಗಿ ಈ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. * ಭಾರತೀಯ ರೈಲ್ವೇ ನಿಲ್ದಾಣಗಳ ಅಭಿವೃದ್ಧಿ ನಿಗಮ (IRSDC) ರೈಲ್ವೇಗೆ ಆಹಾರ ಪೂರೈಕೆಯ ಮಾಡುವ ಜವಾಬ್ದಾರಿಯನ್ನು ಹೊಂದಿದೆ, ಹಾಗೂ ರೈಲ್ವೇ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಹಕ್ಕನ್ನು ಹೊಂದಿದೆ, ಪ್ರಸ್ತುತ IRSDC ಚಂಡೀಗಢ ರೈಲ್ವೇ ನಿಲ್ದಾಣವನ್ನು ವಿಶ್ವ ದರ್ಜೆಯ ರೈಲ್ವೇ ನಿಲ್ದಾಣದ ಮೇಲ್ದರ್ಜೆಗೇರಿಸಲು ಆಯ್ಕೆ ಮಾಡಿಕೊಂಡಿದೆ. * ಈಟ್ ರೈಟ್ ಸ್ಟೇಷನ್ ಸರ್ಟಿಫಿಕೇಷನ್ ಎನ್ನುವುದು ರೈಲ್ವೆಯಲ್ಲಿನ ಎಲ್ಲಾ ಭಾರತೀಯರಿಗೆ ಸುರಕ್ಷಿತ, ಆರೋಗ್ಯಕರ ಹಾಗೂ ರುಚಿಕರ ಆಹಾರವನ್ನು ಖಚಿತಪಡಿಸಿ ನೀಡಲು ಭಾರತದಲ್ಲಿ ಆಹಾರ ವ್ಯವಸ್ಥೆಯನ್ನು ಪರಿವರ್ತಿಸಲು FSSAI ಸಿದ್ದ ಪಡಿಸಿರುವ ದೊಡ್ಡ-ಪ್ರಮಾಣದ ಪ್ರಯತ್ನವಾಗಿದೆ. * ಪ್ರಸ್ತುತ ಚಂಡೀಗಢ ರೈಲ್ವೇ ನಿಲ್ದಾಣವು ಈ ಪ್ರಮಾಣಪತ್ರವನ್ನು ಪಡೆದ ಭಾರತದ 5 ನೇ ರೈಲು ನಿಲ್ದಾಣವಾಗಿದೆ. * 5-ಸ್ಟಾರ್ 'ಈಟ್ ರೈಟ್ ಸ್ಟೇಷನ್' ಪ್ರಮಾಣಪತ್ರ ಪಡೆದ ರೈಲ್ವೆ ನಿಲ್ದಾಣಗಳು: - ದೆಹಲಿಯ ಆನಂದ್ ವಿಹಾರ್ ಟರ್ಮಿನಲ್ ರೈಲ್ವೆ ನಿಲ್ದಾಣ, - ಮುಂಬೈನಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್, - ಮುಂಬೈನಲ್ಲಿ ಮುಂಬೈ ಸೆಂಟ್ರಲ್ ರೈಲ್ವೇ ನಿಲ್ದಾಣ, - ವಡೋದರಾದಲ್ಲಿನ ವಡೋದರಾ ರೈಲ್ವೇ ನಿಲ್ದಾಣ.