Job Description: * ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುವಂತೆ ಮಾದರಿ ಬಾಡಿಗೆ ಕಾಯ್ದೆಯನ್ನುರೊಪಿಸಿದೆ ಈ ಕಾಯ್ದೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆಯನ್ನು ನೀಡಿದೆ. * ಬಾಡಿಗೆಗೆ ಮನೆ ನೀಡುವ ಮಾಲೀಕರು ಇನ್ನು ಮುಂದೆ ಕೇವಲ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಮುಂಗಡವಾಗಿ (ಅಡ್ವಾನ್ಸ್) ಪಡೆಯಬೇಕು, ಪ್ರಸ್ತುತ ಮನೆ ಮತ್ತು ವಾಣಿಜ್ಯ ಕಟ್ಟಡ ಬಾಡಿಗೆ ಒಪ್ಪಂದಗಳ ಮಾಹಿತಿಯನ್ನು ಪ್ರಾಧಿಕಾರಕ್ಕೆ ನೀಡಬೇಕು ಎಂದು ತಿಳಿಸಿದೆ. * ಮಾಸಿಕ(ತಿಂಗಳ) ಮನೆ ಬಾಡಿಗೆ ಮೊತ್ತದ ಎರಡು ತಿಂಗಳ ಹಣವನ್ನು ಮಾತ್ರ ಭದ್ರತಾ ಠೇವಣಿಯಾಗಿ(ಡಿಪಾಜಿಟ್) ಮುಂಗಡವಾಗಿ ಪಡೆಯಬಹುದು, ಹಾಗೂ ವಾಣಿಜ್ಯ ಕಟ್ಟಡಗಳಿಗೆ ಬಾಡಿಗೆ ಮೊತ್ತದ 6 ತಿಂಗಳ ಹಣ ಮಾತ್ರ ಮುಂಗಡವಾಗಿ ಪಡೆಯಬಹುದು ಎಂದು ತಿಳಿಸಲಾಗಿದೆ, ಒಂದು ವೇಳೆ ಬಾಡಿಗೆ ಒಪ್ಪಂದ ಮುಕ್ತಾಯವಾದ ನಂತರ ದಿನಗಳಲ್ಲಿ ಬಾಡಿಗೆದಾರ ಮನೆ ಖಾಲಿ ಮಾಡದಿದ್ದರೆ ಮನೆ ಮಾಲೀಕರು 2 ತಿಂಗಳ ಅವಧಿಗೆ ಬಾಡಿಗೆಯನ್ನು ಹೆಚ್ಚಿಗೆ ಮಾಡಬಹುದು ಮತ್ತೆ ಇದಾದ ನಂತರ ಎರಡು ತಿಂಗಳ ನಂತರ ಮನೆ ಖಾಲಿ ಮಾಡದಿದ್ದರೆ 4ಪಟ್ಟು ಬಾಡಿಗೆ ಹೆಚ್ಚಿಗೆ ಮಾಡಬಹುದು ಎಂದು ತಳಿಸಿದೆ ಆದರೆ ಯಾವುದೇ ಕಾರಣಕ್ಕೂ ಮಾಲೀಕರು ಏಕಾಏಕಿ ಬಾಡಿಗೆದಾರನ ಮನೆಗೆ ತೆರಳುವಂತಿಲ್ಲ ಎಂದು ತಿಳಿಸಿದೆ.