Job Description: * ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಸಭೆಯ ಮೂಲಕ ಐರೋಪ್ಯ ಒಕ್ಕೂಟದ 27 ಸದಸ್ಯ ರಾಷ್ಟ್ರಗಳ ನಾಯಕರ ಜೊತೆಗೆ ಮಾತನಾಡಿದರು, ಪ್ರಸ್ತುತ 8 ವರ್ಷಗಳ ನಂತರ ಸಮಗ್ರ ವಾಣಿಜ್ಯ ಒಪ್ಪಂದಗಳ ಮಾತುಕತೆಯನ್ನು ಪುನರಾರಂಭಿಸುವ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ. * ಇದೇ ವರ್ಚುವಲ್ ಸಭೆಯಲ್ಲಿ ಕೋವಿಡ್-19 ಲಸಿಕೆಗಳ ಪೇಟೆಂಟ್ಗಳನ್ನು ಹಂಚಿಕೊಳ್ಳುವ ಪ್ರಸ್ತಾಪಕ್ಕೆ ಬೆಂಬಲನೀಡುವಂತೆ ಮನವಿ ಮಾಡಿದರು, ಇದರಿಂದ ಜಗತ್ತಿಗೆ ಸಮಾನವಾದ ಲಸಿಕೆ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದರು. * ಭಾರತ-ಐರೋಪ್ಯ ಒಕ್ಕೂಟವು ಸಮತೋಲಿತ ಮತ್ತು ಸಮಗ್ರ ಮುಕ್ತ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಗಳಿಗಾಗಿ ಮಾತುಕತೆಗಳನ್ನು ಪುನಆರಂಭಿಸಲು ಒಪ್ಪಿಗೆ ಸೂಚಿಸಿವೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ. * ಪ್ರಸ್ತುತ 2007ರಲ್ಲಿ ಆರಂಭವಾಗಿದ್ದ ಮುಕ್ತ ವಾಣಿಜ್ಯ ಒಪ್ಪಂದದ ಮಾತುಕತೆಯನ್ನು ಸುಂಕ, ಮಾರುಕಟ್ಟೆ ಪ್ರವೇಶ ವಿಷಯಗಳಲ್ಲಿ ಭಿನ್ನಭಿಪ್ರಾಯ ಮೂಡಿದ್ದರಿಂದ 2013ರಲ್ಲಿ ಕೈಬಿಡಲಾಗಿತ್ತು ಎಂದು ತಿಳಿಸಿದೆ, ಇದೀಗ 8ವರ್ಷಗಳ ನಂತರ ಒಪ್ಪಿಗೆಯನ್ನು ಸೂಚಿಸಿವೆ.