Job Description: * ಒಡಿಶಾ ರಾಜ್ಯ ಸರ್ಕಾರವು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಮ್ಮುಖದಲ್ಲಿ ಮಹತ್ವದ ತೀರ್ಮಾನವನ್ನು ತಿಳಿಸಿದೆ, ಅದುವೇ ರಾಜ್ಯದಲ್ಲಿ ಕಾರ್ಯನಿರತ ಪತ್ರಕರ್ತರು ಮುಂಚೂಣಿ ಕೋವಿಡ್ ಸೇನಾನಿಗಳಾಗಿದ್ದಾರೆ ಘೋಷಣೆ ಮಾಡಿದೆ. * ಪ್ರಸ್ತುತ ಒಡಿಶಾ ರಾಜ್ಯದ ಕಾರ್ಯನಿರತ ಪತ್ರಕರ್ತರು ರಾಜ್ಯದ ಜನರಿಗೆ ಸುದ್ದಿಗಳನ್ನು ನೀಡುವ ಮೂಲಕ ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ, ಅದರಲ್ಲಿಯೂ ಈ ಕೋವಿಡ್-19'ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜನರಲ್ಲಿ ಎಚ್ಚರಿಕೆ ಅಥವಾ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿಳಿಸಿದೆ. * ಒಡಿಶಾ ಸರ್ಕಾರದ ಈ ಮಹತ್ವದ ತೀರ್ಮಾನದಿಂದಾಗಿ ಗೋಪಬಂಧು ಸಾಂಬದಿಕ ಸ್ವಾಸ್ಥ್ಯ ಭೀಮಾ ಯೋಜನೆ ವ್ಯಾಪ್ತಿಗೆ ಬರುವ 6,944 ಕಾರ್ಯನಿರತ ಪತ್ರಕರ್ತರಿಗೆ ತಲಾ 2 ಲಕ್ಷ ರೂ.ಗಳ ಆರೋಗ್ಯ ವಿಮೆ ಸಿಗಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.