Job Description: * ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ನ್ಯಾಯವಾದಿ ಮೌದುದ್ ಅಹ್ಮದ್'ರವರು ತಮ್ಮ 81ನೇ ವಯಸ್ಸಿನಲ್ಲಿ ವಿಧಿವಶರಾದರು. * ಮೌದುದ್ ಅಹ್ಮದ್ ರವರು 24 ಮೇ 1940 - 16 ಮಾರ್ಚ್ 2021 ವರೆಗೆ ಬಾಂಗ್ಲಾದೇಶದ ವಕೀಲ ಮತ್ತು ರಾಜಕಾರಣಿ ಯಾಗಿದ್ದರು. * ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷದ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು. * ಅಹ್ಮದ್ ಸ್ವಾತಂತ್ರ್ಯದ ನಂತರ ಬಾಂಗ್ಲಾದೇಶದ ಪೋಸ್ಟ್ ಮಾಸ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು. * 1980 ರ ದಶಕದಿಂದ ಅವರು ಬಾಂಗ್ಲಾದೇಶ ಸರ್ಕಾರದಲ್ಲಿ ಉಪ ಪ್ರಧಾನ ಮಂತ್ರಿಯಾಗಿ 1976-1978 ಮತ್ತು 1987-1988ರ ವರೆಗೆ ಸೇವೆ ಸಲ್ಲಿಸಿದ್ದಾರೆ. * ಬಾಂಗ್ಲಾದೇಶದ ಪ್ರಧಾನಿಯಾಗಿ 1988-1989ರ ವರೆಗೆ ಸೇವೆ ಸಲ್ಲಿಸಿದ್ದಾರೆ. * ಬಾಂಗ್ಲಾದೇಶದ ಉಪಾಧ್ಯಕ್ಷರಾಗಿ 1989-1990ರ ವರೆಗೆ ಕಾರ್ಯ ನಿರ್ವಹಿಸಿದ್ದಾರೆ. * ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ 2001-2006ರ ವರೆಗೆ ಕಾರ್ಯ ನಿರ್ವಹಿಸಿದ್ದಾರೆ.