Job Description: * ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಹೊಸ ಜಾತಿಯ ಆಲ್ಪೈನ್ ಸಸ್ಯವನ್ನು ವಿಜ್ಞಾನಿಗಳ ಗುಂಪು ಕಂಡುಹಿಡಿದಿದೆ. * ಹೊಸ ಜಾತಿಯ ಸಸ್ಯವು ಹಿಮಾಲಯನ್ ಸೂರ್ಯಕಾಂತಿಯ ಕುಟುಂಬ ವರ್ಗಕ್ಕೆ ಸೇರಿದೆ, ಹಾಗೂ ಇದಕ್ಕೆ ಕ್ರೆಮಂಟೋಡಿಯಮ್ ಇಂಡಿಕಮ್ ಎಂದು ಹೆಸರಿಸಲಾಗಿದೆ. * ಈ ಜಾತಿಯ ಸಸ್ಯವು ಸಾಮಾನ್ಯವಾಗಿ ಜುಲೈನಿಂದ ಆಗಸ್ಟ್ ವರೆಗೆ ಹೂವುಗಳನ್ನೂ ಬಿಡುತ್ತದೆ. * ಅರುಣಾಚಲ ಪ್ರದೇಶದ 16 ಆಡಳಿತ ಜಿಲ್ಲೆಗಳಲ್ಲಿ ಇದು ಒಂದು ತವಾಂಗ್ ಜಿಲ್ಲೆಯ ಪೆಂಗಾ-ಟೆಂಗ್ ತ್ಸೊ ಸರೋವರಕ್ಕೆ ಸ್ಥಳೀಯವಾಗಿದೆ, ಹಾಗೂ ಈ ಆಲ್ಪೈನ್ ಸಸ್ಯ ಪ್ರಭೇದಗಳು ಅಳಿವಿನಂಚಿನಲ್ಲಿವೇ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. * ಆಲ್ಪೈನ್ ವಾತಾವರಣದಲ್ಲಿ ಬೆಳೆಯುವ ಸಸ್ಯಗಳು, ಈ ಸಸ್ಯಗಳು ಶುಷ್ಕತೆ, ಕಡಿಮೆ ತಾಪಮಾನ, ಗಾಳಿ, ಬರ, ನೇರಳಾತೀತ ವಿಕಿರಣ, ಕಳಪೆ ಪೌಷ್ಠಿಕಾಂಶದ ಮಣ್ಣು ಮತ್ತು ಕಡಿಮೆ ಬೆಳವಣಿಗೆಯ ಪರಿಸರ ಪರಿಸ್ಥಿತಿಗಳ ಕಠಿಣ ಆಲ್ಪೈನ್ ಹವಾಮಾನಕ್ಕೆ ಹೊಂದಿಕೊಳ್ಳುತ್ತವೆ.