Job Description: * ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ವಿಷನ್ 2030ರ ಅಡಿಯಲ್ಲಿ ಮಹಿಳೆಯರು ಇನ್ನು ಮುಂದೆ ಶಸ್ತ್ರಾಸ್ತ್ರಗಳನ್ನು ಹಿಡಿದು ಸೇನೆಗೆ ಸೇರಬಹುದು ಎಂದು ತಿಳಿಸಿದೆ, ಮಹಿಳೆಯರು ಸೌದಿ ಅರೇಬಿಯಾ ಸೇನೆ, ರಾಯಲ್ ಸೌದಿ ಏರ್ ಡಿಫೆನ್ಸ್, ರಾಯಲ್ ಸೌದಿ ನೌಕಾಪಡೆ, ರಾಯಲ್ ಸೌದಿ ಸ್ಟ್ರಾಟೆಜಿಕ್ ಮಿಸೈಲ್ ಫೋರ್ಸ್ ಮತ್ತು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಿಗೆ ಸೇರಬಹುದು ಎಂದು ಸೌದಿ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ ಎಂದು ಗಲ್ಫ್ ನ್ಯೂಸ್ ವರದಿ ಪ್ರಕಟಿಸಿದೆ. * ಸೌದಿ ರಕ್ಷಣಾ ಸಚಿವಾಲಯವು ತಮ್ಮ ಏಕೀಕೃತ ಪ್ರವೇಶ ಪೋರ್ಟಲ್ ಮೂಲಕ ಸೌದಿ ಮಹಿಳೆಯರಿಗೆ ಮಿಲಿಟರಿಯಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ವರದಿಯನ್ನು ಪ್ರಕಟಿಸಿದೆ, ಸೌದಿ ರಕ್ಷಣಾ ಸಚಿವಾಲಯದ ಪ್ರಕಾರ ಮಹಿಳೆಯರನ್ನು ಸೈನಿಕರು, ಲ್ಯಾನ್ಸ್ ಕಾರ್ಪೊರಲ್ ಗಳು, ಕಾರ್ಪೊರಲ್ ಗಳು, ಸಾರ್ಜೆಂಟ್ ಗಳು ಮತ್ತು ಸಿಬ್ಬಂದಿ ಸಾರ್ಜೆಂಟ್ ಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಸೌದಿ ರಕ್ಷಣಾ ಸಚಿವಾಲಯ ತಿಳಿಸಿದೆ.