Job Description: * ತಮಿಳುನಾಡು ಸರ್ಕಾರವು ಕೋವಿಡ್ ಕಾರಣದಿಂದ ಆನ್ಲೈನ್ ತರಗತಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಸಲುವಾಗಿ ತಮಿಳುನಾಡಿನ ಪ್ರತಿ ವಿದ್ಯಾರ್ಥಿಗಳಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರತಿ ದಿನ 2GB ಡೇಟಾವನ್ನು ಕಲಿಕೆಯ ಸಲುವಾಗಿ ಉಚಿತವಾಗಿ ನೀಡಲು ನಿರ್ಧರಿಸಿದೆ ಎಂದು ತಮಿಳುನಾಡಿನ ಸಿಎಂ ಪಳನಿ ಸ್ವಾಮಿ ಅವರ ಸರ್ಕಾರ ಆದೇಶ ಹೊರಡಿಸಿದೆ. * ಈ ನೂತನ ಯೋಜನೆಯಿಂದಾಗಿ ತಮಿಳುನಾಡು ರಾಜ್ಯದ 9,69,047 ವಿದ್ಯಾರ್ಥಿಗಳಿಗೆ ಪ್ರತಿದಿನ 2GB ಡೇಟಾ ಉಚಿತವಾಗಿ ನೀಡಲಾಗುತ್ತದೆ. ಸರ್ಕಾರಿ ಅನುದಾನಿತ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜುಗಳು, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳಿಗೆ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಯ ಉಪಯೋಗ ಪಡೆಯಲಿದ್ದಾರೆ. * ಆನ್ಲೈನ್ ತರಗತಿಯ ಕಾಲೇಜು ವಿದ್ಯಾರ್ಥಿಗಳಿಗೆ ಜನವರಿ ಯಿಂದ ಏಪ್ರಿಲ್ವರೆಗೆ ಉಚಿತ ಇಂಟರ್ನೆಟ್ ಸೌಲಭ್ಯ ಒದಗಿಸಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.