Job Description: ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಯು ತನ್ನ ಪಡೆಯ ವೀರ ಹುತಾತ್ಮ, ಧೈರ್ಯಶಾಲಿ 13 ಯೋಧರ ಸಾಹಸ ಕುರಿತಾದ ‘ದಿ ಶೌರ್ಯ ಅನ್ಬಾಂಡ್’ ಎಂಬ ಕೃತಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ವಿಶೇಷ ಕೃತಿಯಲ್ಲಿ 2001ರಲ್ಲಿ ಸಂಸತ್ ಭವನ ದಾಳಿ ವೇಳೆ ಹುತಾತ್ಮರಾದ ವೀರ ಯೋಧ ಕಮಲೇಶ್ ಕುಮಾರಿ ಅವರ ಜೀವನಗಾಥೆಯನ್ನೂ ಒಳಗೊಂಡಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಭಾನುವಾರ ಈ ಕೃತಿಯನ್ನು ಬಿಡುಗಡೆಗೊಳಿಸಿದರು.