Job Description: ಹೈದ್ರಾಬಾದ್ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆಯಾದ ಕೂಚುಪುಡಿ ನೃತ್ಯದಲ್ಲಿ ಅಪಾರ ಸಾಧನೆ ಮಾಡಿದ್ದ ಕಲಾವಿದೆ ಶೋಭಾ ನಾಯ್ಡು ಅವರು ಇತ್ತೀಚಿಗೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. * 1956 ರಲ್ಲಿ ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ಜನನ * ವೇಂಪತಿ ಚಿನ್ನ ಸತ್ಯಂ ಅವರಿಂದ ಕೂಚುಪುಡಿ ನೃತ್ಯ ತರಬೇತಿ ಪಡೆಡಿದ್ದರು. * 1991 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, - 2001 ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಗೌರವ - ಮದ್ರಾಸ್ನ ಶ್ರೀ ಕೃಷ್ಣ ಗಣ ಸಭೆಯಿಂದ ನೃತ್ಯ ಚೂಡಾಮಣಿ ಪ್ರಶಸ್ತಿ ಇನ್ನು ಹಲವು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ. * ಹೈದರಾಬಾದ್ನ ಕೂಚುಪುಡಿ ಆರ್ಟ್ ಅಕಾಡೆಮಿಯ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಕೆ. * ದೇಶ ವಿದೇಶದ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.