Job Description: ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷರಾಗಿರುವ ಅಜಯ್ ತ್ಯಾಗಿ ಅವರ ಅಧಿಕಾರ ಅವಧಿಯನ್ನು ಹಣಕಾಸು ಸಚಿವಾಲಯವು ಮತ್ತೆ 18 ತಿಂಗಳ ಕಾಲ ವಿಸ್ತರಿಸಿರುವದಾಗಿ ತಿಳಿಸಿದೆ. ಭಾರತೀಯ ಆರ್ಥಿಕತೆ ಮತ್ತು ಕಾರ್ಪೊರೇಟ್ ವಲಯವು ಕೋರೋಣ ಸೋಂಕಿನಿಂದ ತತ್ತರಿಸಿರುವ ಈ ಸಮಯದಲ್ಲಿ ಸೆಬಿಯಲ್ಲಿ ಯಾವುದೇ ಅಡೆತಡೆಗಳು ಉಂಟಾಗದಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿರುವದಾಗಿ ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.