Job Description: ಅರುಣಾಚಲ ಪ್ರದೇಶದ ಬುಡಕಟ್ಟು ಸಮುದಾಯವೊಂದು ಅಪರೂಪದ ಹಕ್ಕಿಯ ಪ್ರಭೇದವೊಂದನ್ನು ಸಂರಕ್ಷಿಸುತ್ತಿರುವುದರ ಕುರಿತು ನಿರ್ಮಿಸಲಾಗಿರುವ 29 ನಿಮಿಷಗಳ ಸಾಕ್ಷ್ಯಚಿತ್ರವು ಪ್ಯಾರಿಸ್ ನಗರದಲ್ಲಿ ಈ ವರ್ಷದ ಡಿಸೆಂಬರ್ 1ರಿಂದ 7ರವರೆಗೆ ನಡೆಯಲಿರುವ ಪರಿಸರ ಸಿನಿಮೋತ್ಸವಕ್ಕೆ ನಾಮನಿರ್ದೇಶನಗೊಂಡಿದೆ. ‘ಸಿಂಗ್ಚುಂಗ್ ಹಳ್ಳಿಯಲ್ಲಿ ಬುಗುನ್ ಬುಡಕಟ್ಟು ಸಮುದಾಯವು ಹೇಗೆ ವನ್ಯಜೀವಿಗಳ ಸಂರಕ್ಷಣೆ ಮಾಡುತ್ತಿದೆ ಎನ್ನುವುದರ ಕುರಿತ ಸಾಕ್ಷ್ಯಚಿತ್ರ ಇದಾಗಿದೆ. ಈ ಸಮುದಾಯ ವಾಸಿಸುವ ‘ಈಗಲ್ನೆಸ್ಟ್ ವನ್ಯಜೀವಿ ಅಭಯಾರಣ್ಯ’ ಪ್ರದೇಶದಲ್ಲಿ ಅಳಿವಿನಂಚಿನಲ್ಲಿ ಇರುವ ‘ಬುಗುನ್ ಲಿಯೊಸಿಚ್ಲ’ ಹಕ್ಕಿಗಳಿವೆ * 1995ರಲ್ಲಿ ಪ್ರಾಣಿ ವಿಜ್ಞಾನಿ ರಮಣ ಅಥ್ರೇಯ ಈ ಹಕ್ಕಿಗಳನ್ನು ಪತ್ತೆಮಾಡಿದರು. ಇವುಗಳು ಈ ಅರುಣಾಚಲ ಪ್ರದೇಶದ ಈ ಅರಣ್ಯದಲ್ಲಷ್ಟೇ ಕಾಣಸಿಗುತ್ತವೆ.