Job Description: ನವದೆಹಲಿ: ದೆಹಲಿಯಲ್ಲಿ ಅರ್ಹ ಫಲಾನುಭವಿಗಳ ಪಡಿತರ ಪೂರೈಸುವ ನೂತನ ಯೋಜನೆಯಾದ "ಮುಖ್ಯಮಂತ್ರಿ ಘರ್ ಘರ್ ರೇಷನ್ ಯೋಜನೆ" ಗೆ ದೆಹಲಿ ಸರ್ಕಾರದ ಸಚಿವ ಸಂಪುಟ ಅನುಮತಿ ನೀಡಿರುವದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಕೇಜ್ರಿವಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ನೂತನ ಯೋಜನೆಯನ್ನು ಘೋಷಿಸಿದರು, ಕೋವಿಡ್ ಸಂದರ್ಭದಲ್ಲಿ ಬಡಜನರು ಪಡಿತರ ಪಡೆಯಲು ಹಲವು ಸಮಸ್ಯೆ ಎದುರಿಸುತ್ತಿದ್ದು, ಪರಿಹಾರಕ್ಕೆ ದೆಹಲಿಯ ಎಎಪಿ ಸರ್ಕಾರ ಜನ ಮನೆ ಬಾಗಿಲಿಗೆ ಪಡಿತರ ವಿತರಿಸಲು ಮುಂದಾಗಿದೆ.