Job Description: ಪ್ಯಾರಿಸ್ : ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಜಾಗತಿಕವಾಗಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆ ಈ ವರ್ಷ ಯಾವುದೇ ಆಟಗಾರನಿಗೆ ಬ್ಯಾಲನ್ ಡಿ'ಓರ್ ಟ್ರೋಫಿ ನೀಡದಿರಲು ಫ್ರಾನ್ಸ್ ಫುಟ್ಬಾಲ್ ನಿಯತಕಾಲಿಕೆಯು ನಿರ್ಧರಿಸಿದೆ. ಈ ಮೂಲಕ 1956ರ ನಂತರ ಇದೇ ಮೊದಲ ಬಾರಿಗೆ ಬ್ಯಾಲನ್ ಡಿ' ಓರ್ ಪ್ರಶಸ್ತಿ ರದ್ದಾಗಿದೆ. * ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1956ರಲ್ಲಿ ಸ್ಟಾನ್ಲಿ ಮ್ಯಾಥ್ಯೂಸ್ ಅವರು ಪಡೆದಿದ್ದರು. * ಅರ್ಜೆಂಟೀನದ ಸ್ಟಾರ್ ಲಿಯೊನೆಲ್ ಮೆಸ್ಸಿ ಆರು ಬಾರಿ ಬ್ಯಾಲನ್ ಡಿ' ಓರ್ ಪ್ರಶಸ್ತಿ ಜಯಿಸಿದ್ದಾರೆ. * ಪೋರ್ಚುಗಲ್ನ ಕ್ರಿಸ್ಟಿಯಾನೊ ರೊನಾಲ್ಡೊ 5 ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದಾರೆ.