Job Description: ನವದೆಹಲಿ : ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ನ ಜಿಯೋ ಫ್ಲಾಟ್ಫಾರಂನಲ್ಲಿ ಗೂಗಲ್ನ ಮಾತೃಸಂಸ್ಥೆ ಆಲ್ಫಬೆಟ್ 33,838.15 ಕೋಟಿ ರೂ. ಹೂಡಿಕೆ ಮಾಡಿದೆ. ಈ ಹೂಡಿಕೆಗಾಗಿ ಜಿಯೋ ಪ್ಲಾಟ್ಫಾರಂನ ಶೇ.7.7 ಷೇರುಗಳನ್ನು ಆಲ್ಫಬೆಟ್ ಖರೀದಿಸಿದೆ. ಗೂಗಲ್ನ ಈ ಹೂಡಿಕೆಯೊಂದಿಗೆ ಜಿಯೋ ಫ್ಲಾಟ್ಫಾರಂನಲ್ಲಿ ವಿವಿಧ ವಿದೇಶಿ ಹೂಡಿಕೆದಾರರಿಂದ ಒಟ್ಟು 1,52,046.10 ಕೋಟಿ ರೂ. ಹೂಡಿಕೆ ಜಿಯೋ ಪಾಲಾಗಿದೆ. ಇತ್ತೀಚಿಗೆ ನಡೆದ ರಿಲಯನ್ಸ್ ಇಂಡಸ್ಟ್ರೀಸ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖೇಶ್ ಅಂಬಾನಿ ಈ ವಿಷಯವನ್ನು ತಿಳಿಸಿದರು.