Job Description: ಬೆಂಗಳೂರು: ಪ್ರಸಕ್ತ 2020 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಫಲಿತಾಂಶದ ವಿವರಗಳನ್ನು ಪತ್ರಿಕಾಗೋಷ್ಟಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಿಡುಗಡೆಗೊಳಿಸಿ ಅಧಿಕೃತವಾಗಿ ಮಾಹಿತಿ ನೀಡಿದರು. ಕಳೆದ ಬಾರಿಗಿಂತ ಈ ವರ್ಷ ಫಲಿತಾಂಶದಲ್ಲಿ ಏರಿಕೆ ಕಂಡುಬಂದಿದ್ದು, ಈ ಬಾರಿ ಶೇ.61.80 ಫಲಿತಾಂಶ ಬಂದಿದೆ(ಕಳೆದ ವರ್ಷ ಶೇ.61.73 ರಷ್ಟು ಫಲಿತಾಂಶ). ಹಾಗು ಪ್ರತಿಸಲದಂತೆ ಈ ಬಾರಿಯೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ. * ಉಡುಪಿ ಜಿಲ್ಲೆ ಈ ಬಾರಿಯೂ ಪ್ರಥಮ ಸ್ಥಾನ (90.71%) ಪಡೆದಿದೆ. ದಕ್ಷಿಣ ಕನ್ನಡ ದ್ವಿತೀಯ(90.71%) ಸ್ಥಾನ ಮತ್ತು ಕೊಡಗು ಜಿಲ್ಲೆ ಮೂರನೇ ಸ್ಥಾನ (81.53%) ಪಡೆದಿದೆ. * ಚಿತ್ರದುರ್ಗ, ರಾಯಚೂರು ಮತ್ತು ವಿಜಯಪುರ ಕೊನೆಯ ಮೂರು ಸ್ಥಾನಗಳಲ್ಲಿದೆ. * ಒಟ್ಟಾರೆಯಾಗಿ ವಿಜ್ಞಾನ ವಿಭಾಗದಲ್ಲಿ- ಶೇ.76.2, ಕಲಾ ವಿಭಾಗದಲ್ಲಿ ಶೇ. 41.27, ವಾಣಿಜ್ಯ ವಿಭಾಗದಲ್ಲಿ ಶೇ. 65.52 ಫಲಿತಾಂಶ ಬಂದಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.