Job Description: ವಾಷಿಂಗ್ಟನ್ : ಇತ್ತೀಚಿಗೆ ಪಾಕಿಸ್ತಾನದಲ್ಲಿ ವರದಿಯಾಗಿರುವ ನಕಲಿ ಪೈಲಟಗಳ ಹಗರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಮೇರಿಕಾ ರಾಷ್ಟ್ರವು ಅಮೆರಿಕ ಪ್ರವೇಶಿಸುವ ಎಲ್ಲ ಪಾಕಿಸ್ತಾನದ ವಿಮಾನಗಳಿಗೆ ಅಮೆರಿಕ ನಿರ್ಬಂಧ ಹೇರಿದೆ. * ಪ್ರಯಾಣಿಕರ ಹಿತದೃಷ್ಟಿಯಿಂದ ನಾವು ಈ ಕ್ರಮ ಕೈಗೊಂಡಿದ್ದೇವೆ, ಪಾಕಿಸ್ತಾನದಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿದ್ದೇವೆ ಎಂದು ಅಮರಿಕದ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. * ಪ್ರಸ್ತುತ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೈಲಟ್ ಗಳಲ್ಲಿ ಮೂರನೇ ಒಂದು ಭಾಗದಷ್ಟು ಜನ ಸುಳ್ಳು ದಾಖಲೆ ಸೃಷ್ಟಿಸಿ ಕೆಲಸ ಪಡೆದಿರುವ ಬಗ್ಗೆ ವರದಿಯಾಗಿದ್ದರ ಹಿನ್ನೆಲೆಯಲ್ಲಿ ಅಮೆರಿಕ ಪ್ರವೇಶಿಸುವ ಪಾಕಿಸ್ತಾನದ ಎಲ್ಲಾ ವಿಮಾನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.