Job Description: ಬೀಜಿಂಗ್ : ಚೀನಾ ದೇಶವು ಅಮೇರಿಕಾ ದೇಶದ ಸಿಬ್ಬಂದಿಗಳ ಮೇಲೆ ವೀಸಾ ನಿರ್ಬಂಧ ವಿಧಿಸಿದೆ. ಅಮೆರಿಕದಿಂದ ತಪ್ಪು ನಿರ್ಧಾರಗಳಿಗೆ ಪ್ರತಿಯಾಗಿ ಆ ದೇಶದ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧವನ್ನು ವಿಧಿಸುವ ನಿರ್ಧಾರವನ್ನು ಚೀನಾ ಕೈಗೊಂಡಿದ್ದು, ಇದಕ್ಕೆ ಮೂಲ ಕಾರಣವೂ ಟಿಬೆಟ್ ವಿಚಾರದಲ್ಲಿ ಅಮೆರಿಕಾವು ಕೆಟ್ಟದ್ದಾಗಿ ವರ್ತಿಸಿದ್ದಾಗಿದೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜೋ ಲಿಜಿಯಾನ್ ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ. 2018ರ ಕಾಯ್ದೆಯೊಂದರ ಅಡಿಯಲ್ಲಿ ಚೀನಾದ ಕೆಲ ಅಧಿಕಾರಿಗಳಿಗೆ ವೀಸಾ ನಿರ್ಬಂಧಸಿದ ಅಮೆರಿಕದ ನಡೆಯ ಹಿನ್ನಡೆ ಚೀನಾವು ತನ್ನ ಈ ನಿರ್ಧಾರ ಪ್ರಕಟಿಸಿದೆ. * ಅಮೆರಿಕವು ಕೂಡ ವಿದೇಶಗಳ ವಿದ್ಯಾರ್ಥಿಗಳಿಗೂ ಕೂಡ ವೀಸಾ ನಿರ್ಬಂಧ ವಿಧಿಸಿದ್ದು, ಆನ್ಲೈನ್ ತರಗತಿ ಇರುವ ವಿದ್ಯಾರ್ಥಿಗಳಿಗೆ ದೇಶ ತೊರೆಯಲು ಸೂಚನೆ ನೀಡಿದೆ.