Job Description: ಮಂಗಳ ಗ್ರಹದ ಮೇಲೆ ನೀರಿನ ಕುರುಹು ಪತ್ತೆಯಾಗಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ. ಮಂಗಳ ಗ್ರಹದ ಮೇಲೆ ಬೃಹತ್ ಮಂಜುಗಡ್ಡೆಯ ಕುಳಿ ಪತ್ತೆಯಾಗಿದ್ದು, ಇದು ಅಂದಾಜು 82 ಕಿ.ಮೀ. ಅಗಲವಾಗಿದ್ದು, ಈ ಕುಳಿಯಲ್ಲಿ 1.8 ಕಿ.ಮೀ. ಆಳವಾದ ಮಂಜುಗಡ್ಡೆ ಇದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ. * ಪತ್ತೆಯಾದ ಈ ಕುಳಿಯನ್ನು ಕೊರೊಲೇವ್ ಕುಳಿ ಎಂದು ಗುರುತಿಸಲಾದ್ದು, ಈ ಕುಳಿಯ ದೃಶ್ಯಗಳನ್ನು ತನ್ನ ಮಾರ್ಸ್ ಎಕ್ಸ್ಪ್ರೆಸ್ ರವಾನಿಸಿರುವುದಾಗಿ ಇಎಸ್ಎ ತಿಳಿಸಿದೆ. * ಮಂಗಳಗ್ರಹದ ಅಧ್ಯಯನಕ್ಕಾಗಿ ಈಗಾಗಲೇ ಅಮೆರಿಕ, ಯುರೋಪ್ ಒಕ್ಕೂಟ ಮತ್ತು ಭಾರತ ಸೇರಿ ಅನೇಕ ದೇಶಗಳು ಪ್ರಯತ್ನ ಮುಂದುವರೆಸಿರುವ ಈ ಸಮಯದಲ್ಲಿ ಇಎಸ್ಎ ಸಿಹಿಸುದ್ದಿ ನೀಡಿದೆ.