Job Description: ನವದೆಹಲಿ: ಇತ್ತೀಚಿಗೆ ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕ ಸೂಚ್ಯಂಕ ಬಿಡುಗಡೆಗೊಂಡಿದ್ದು, ಈ ಪಟ್ಟಿಯಲ್ಲಿ ಭಾರತವು 34 ನೇ ಶ್ರೇಯಾಂಕ ಪಡೆದಿದೆ, ಅಲ್ಲದೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಂದು ಹಂತ ಮೇಲೆ ಏರಿದೆ. * ರಿಯಲ್ ಎಸ್ಟೇಟ್ ವಲಯದ ಸುಧಾರಣೆಗಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹಲವು ಯೋಜನೆಗಳಾದ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ 2016 (ರೇರಾ) ಮತ್ತು ಜಿಎಸ್ಟಿ, ಬೇನಾಮಿ ವಹಿವಾಟು ನಿರ್ಬಂಧ (ತಿದ್ದುಪಡಿ) ಕಾಯ್ದೆ, ದಿವಾಳಿ ಸಂಹಿತೆ (ಐಬಿಸಿ) ಹಾಗೂ ಭೂ ದಾಖಲೆಗಳ ಡಿಜಿಟಲೀಕರಣ ಸೇರಿ ಹಲವು ಕ್ರಮಗಳನ್ನು ಕೈಗೊಂಡಿದ್ದರಿಂದ ರಿಯಲ್ ಎಸ್ಟೇಟ್ ವಲಯದಲ್ಲಿ ಹೆಚ್ಚಿನ ಪಾರದರ್ಶಕತೆ ಕಂಡು ಬಂದಿದೆ. ರಿಯಲ್ ಎಸ್ಟೇಟ್ ಪಾರದರ್ಶಕತೆಯಲ್ಲಿ ಇತರೆ ದೇಶಗಳ ಸ್ಥಾನಮಾನ ಇಂಗ್ಲೆಂಡ್ - 1 ಅಮೆರಿಕ - 2 ಆಸ್ಟ್ರೇಲಿಯಾ - 3 ಚೀನಾ - 32 ಭಾರತ - 34 ಶ್ರೀಲಂಕಾ - 65