Job Description: ನವದೆಹಲಿ : ವಿಶ್ವದ ಅತಿದೊಡ್ಡ ಕೋವಿಡ್-19 ಆಸ್ಪತ್ರೆಯನ್ನು ದೆಹಲಿ ಮತ್ತು ಹರಿಯಾಣ ಗಡಿಗೆ ಸಮೀಪವಿರುವ ಚಟ್ಟರ್ ಪುರ್ ಎಂಬ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ಆಸ್ಪತೆಯಲ್ಲಿ ಒಟ್ಟು 10 ಸಾವಿರ ಬೆಡ್ ಗಳ ಸಾಮರ್ಥ್ಯವಿದ್ದು, ಈ ನೂತನ ಅರೋಗ್ಯ ಕೇಂದ್ರವನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿರುವ ಅನಿಲ್ ಬೈಜಾಲ್ ಉದ್ಘಾಟಿಸಿದರು. * ಕೇಂದ್ರ ಗೃಹ ಸಚಿವಾಲಯದ ಸಹಾಯದೊಂದಿಗೆ ನಿರ್ಮಿಸಲಾದ ಈ ಆಸ್ಪತ್ರೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಕೋವಿಡ್ ಆಸ್ಪತ್ರೆ ಎಂದು ಹೆಸರಿಸಲಾಗಿದೆ. * ಈ ಆಸ್ಪತ್ರೆ ವಿಶ್ವದಲ್ಲೇ ಅತಿದೊಡ್ಡ ಕೋವಿಡ್-19 ಕೇಂದ್ರವಾಗಿದೆ. 200 ಕೋಠಡಿಗಳು ತಲಾ 50 ಹಾಸಿಗೆಗಳನ್ನು ಹೊಂದಿವೆ. ಹಾಗೂ ಒಟ್ಟು 75 ಕ್ಕೂ ಅಧಿಕ ಆಯಂಬುಲೆನ್ಸ್ ಗಳ ಸೌಲಭ್ಯ ಈ ಆಸ್ಪತ್ರೆಯಲ್ಲಿದೆ.