Job Description: ಶಾಂಘೈ: ಬ್ಯಾಡ್ಮಿಂಟನ್ ನ ಶ್ರೇಷ್ಠ ಆಟಗಾರರಾದ 'ಸೂಪರ್ ಡ್ಯಾನ್' ಎಂದೇ ಖ್ಯಾತರಾದ ಚೀನಾದ ಲಿನ್ ಡ್ಯಾನ್ ಅವರು ಇತ್ತೀಚಿಗೆ ತಮ್ಮ ಕ್ರೀಡಾ ಬದುಕಿಗೆ ವಿದಾಯ ಘೋಷಿಸಿದರು. ಇವರು 2 ಬಾರಿ ಒಲಿಂಪಿಕ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. 36 ವರ್ಷದ ಲಿನ್ ಡ್ಯಾನ್, ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಕನಸು ಕೈಬಿಟ್ಟು ತಮ್ಮ ವಿದಾಯ ಘೋಷಿಸಿಕೊಂಡಿದ್ದಾರೆ. * 28 ವಯಸ್ಸಿನಲ್ಲೇ ಎಲ್ಲ ಪ್ರಮುಖ 9 ಬ್ಯಾಡ್ಮಿಂಟನ್ ಪ್ರಶಸ್ತಿಗಳನ್ನು (ಒಲಿಂಪಿಕ್ಸ್, ವಿಶ್ವ ಚಾಂಪಿಯನ್ಷಿಪ್, ಥಾಮಸ್ ಕಪ್, ವಿಶ್ವಕಪ್, ಸುಧೀರ್ಮನ್ ಕಪ್, ಆಲ್ ಇಂಗ್ಲೆಂಡ್, ಏಷ್ಯನ್ ಗೇಮ್ಸ್, ಏಷ್ಯನ್ ಚಾಂಪಿಯನ್ಷಿಪ್, ಸೂಪರ್ ಸಿರೀಸ್ ಮಾಸ್ಟರ್ಸ್ ಫೈನಲ್ಸ್) ಜಯಿಸುವ ಮೂಲಕ 'ಸೂಪರ್ ಗ್ರಾಂಡ್ ಸ್ಲಾಂ' ಸಾಧಿಸಿದ್ದರು. * ಸಿಂಗಲ್ಸ್ ವೃತ್ತಿಜೀವನದಲ್ಲಿ 666 ಗೆಲುವು, 128 ಸೋಲು ಕಂಡಿರುವ ಮಾಜಿ ವಿಶ್ವ ನಂ. 1 ಡ್ಯಾನ್, 66 ಪ್ರಶಸ್ತಿ ಜಯಿಸಿದ್ದಾರೆ. ಒಲಿಂಪಿಕ್ಸ್ ಸಿಂಗಲ್ಸ್ನಲ್ಲಿ ಸತತ 2 ಸ್ವರ್ಣ ಜಯಿಸಿದ ಏಕೈಕ ಷಟ್ಲರ್ ಇವರಾಗಿದ್ದಾರೆ.