Job Description: ನವದೆಹಲಿ : ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಯಾಗಿ ಕೇಂದ್ರ ಸರ್ಕಾರವು ಹಿರಿಯ ಐಎಫ್ಎಸ್ ಅಧಿಕಾರಿ ಇಂದ್ರಮಣಿ ಪಾಂಡೆ ಅವರನ್ನು ನೇಮಸಿ ಆದೇಶ ಹೊರಡಿಸಿದೆ. * 1990ರ ಸಾಲಿನ ಐಎಫ್ಎಸ್ ಅಧಿಕಾರಿಯಾಗಿರುವ ಇಂದ್ರಮಣಿ ಪಾಂಡೆಯವರು ಈ ಮೊದಲು 2015ರಲ್ಲಿ ಓಮನ್ನಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆಸಲ್ಲಿಸಿದ್ದಾರೆ. ಅಲ್ಲದೆ, ಪ್ಯಾರಿಸ್ನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. * ವಿಶ್ವ ಸಂಸ್ಥೆ ಕೇಂದ್ರ ಕಚೇರಿ : ಜಿನೇವಾ