Job Description: ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಆರಂಭಿಸುವದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ. ಶೀಘ್ರದಲ್ಲಿಯೇ ಸರಕಾರಿ ಸ್ವಾಮ್ಯದ ಇನ್ಸ್ಟಿಟ್ಯೂಟ್ ಆಫ್ ಲಿವರ್ ಆಯಂಡ್ ಬಿಲಿಯರಿ ಸೈನ್ಸಸ್ನಲ್ಲಿ ಪ್ಲಾಸ್ಮಾ ಬ್ಯಾಂಕ್ ಆರಂಭಗೊಳ್ಳಲಿದ್ದು, ಕೋರೋಣ ಸೋಂಕು ಪೀಡಿತನಿಗೆ ಪ್ಲಾಸ್ಮಾ ಅಗತ್ಯವಿದ್ದರೆ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಈ ಸಂಸ್ಥೆಯನ್ನು ಸಂಪರ್ಕಿಸಬಹುದು ಅವರು ತಿಳಿಸಿದ್ದಾರೆ. ಪ್ಲಾಸ್ಮಾ ದಾನಕ್ಕೆ ಮನವಿ : ಪ್ಲಾಸ್ಮಾ ಬ್ಯಾಂಕ್ ಯಶಸ್ವಿಯಾಗಬೇಕಾದರೆ ಕೋವಿಡ್-19 ಸೋಂಕಿನಿಂದ ಈಗಾಗಲೇ ಗುಣಮುಖರಾದ ಸ್ವಯಂ ಪ್ರೇರಿತರಾಗಿ ಪ್ಲಾಸ್ಮಾ ದಾನಕ್ಕೆ ಮುಂದೆ ಬರಬೇಕು ಎಂದು ಕೇಜ್ರಿವಾಲ್ ಅವರು ಮನವಿ ಮಾಡಿದ್ದಾರೆ. * ಕೋವಿಡ್-19 ಚಿಕಿತ್ಸೆಗೆ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ದೇಶದಲ್ಲಿ ಇದೇ ಮೊದಲು.