Job Description: ತ್ರಿಪುರದ ರಾಜ್ಯ ಸರ್ಕಾರದಿಂದ ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಶಿಕ್ಷಣ ಇಲಾಖಾ ಸಚಿವರು ದಿನಾಂಕ ಜೂನ್ 24 ರಂದು "ಮುಖ್ಯಮಂತ್ರಿ ಮಾತೃ ಪುಷ್ಟಿ ಉಪಹಾರ್" ಎಂಬ ನೂತನ ಯೋಜನೆಯನ್ನು ಆರಂಭಿಸುವದಾಗಿ ಘೋಷಿಸಿದ್ದು, ಈ ನೂತನ ಯೋಜನೆಯಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಪೌಷ್ಠಿಕಾಂಶದ ಕಿಟ್‌ಗಳನ್ನು ಪೂರೈಸಲು ಉದ್ದೇಶಿಸಲಾಗಿದೆ. ಇನ್ನು ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಮಾತೃ ಬಂಧನ ಯೋಜನೆ ಕೂಡ ರಾಜ್ಯದ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಅನ್ವಯವಾಗಲಿದೆ. ಯೋಜನೆಯ ಮುಖ್ಯ ಉದ್ದೇಶ : ರಾಜ್ಯದಲ್ಲಿ ಶಿಶು ಮತ್ತು ತಾಯಿಯ ಮರಣವನ್ನು ಪ್ರಮಾಣವನ್ನು ಗರಿಷ್ಠ ಮಟ್ಟದಲ್ಲಿ ನಿಯಂತ್ರಿಸುವದು ರಾಜ್ಯ ಸರ್ಕಾರದ ಯೋಜನೆಯ ಉದ್ದೇಶವಾಗಿದೆ.