Job Description: ನವದೆಹಲಿ : ಕೊರೊನಾವೈರಸ್ ಭೀತಿಯಿಂದ ದೇಶದಲ್ಲಿ ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಚಂದ್ರಯಾನ, ಗಗನಯಾನ ಸೇರಿದಂತೆ 10 ವಿವಿಧ ಬಾಹ್ಯಾಕಾಶ ಯೋಜನೆಗಳಿಗೆ ISRO ದಿಂದ ತಡೆನೀಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಕೆ ಶಿವನ್ ಮಾಹಿತಿ ನೀಡಿದ್ದಾರೆ. * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಾನವಸಹಿತ ಗಗನಯಾನ ಸೇರಿ ಒಟ್ಟು 10 ಬಾಹ್ಯಾಕಾಶ ಯೋಜನೆಗಳನ್ನು ರೂಪಿಸಿತ್ತು, ಆದರೆ ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಎಲ್ಲಾ ಯೋಜನಗಳು ತಡವಾಗಲಿವೆ. ಇದೆ ಕಾರಣದಿಂದಾಗಿ ಈ ವರ್ಷದ ಎಲ್ಲಾ ಯೋಜನೆಗಳನ್ನು ಮುಂದಿನ ವರ್ಷಕ್ಕೆ ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ISRO ಮುಖ್ಯಸ್ಥರು ತಿಳಿಸಿದರು.