Job Description: ಭಾರತೀಯ ಅಂಚೆ ಇಲಾಖೆಯಿಂದ ಡಿಜಿಟಲ್ ಮತ್ತು ಆನ್‍ಲೈನ್ ಬ್ಯಾಂಕಿಂಗ್ ಸೇವೆಯನ್ನು ಈಗಾಗಲೇ ನೀಡಲಾಗುತ್ತಿದ್ದು, ಈ ಕುರಿತು ಜೂನ್ 23ರಂದು ಅಂಚೆ ಇಲಾಖೆಯು ವಿಶೇಷ ಅಭಿಯಾನ ಆಯೋಜಿಸಿದೆ. * ಅಂಚೆ ಕಚೇರಿಗಳಲ್ಲಿ, ಪೋಸ್ಟ್ ಮ್ಯಾನ್ ಮೂಲಕ IPPB (ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್) ಖಾತೆಗಳನ್ನು ತೆರೆಯಬಹುದು ಹಾಗೂ AEPS ಮೂಲಕ ಇತರ ಬ್ಯಾಂಕ್‍ನಲ್ಲಿರುವ ಹಣವನ್ನು ಯಾವುದೇ ಶುಲ್ಕವಿಲ್ಲದೆ ಪಡೆಯಬಹುದಾಗಿದೆ. ಇದಕ್ಕಾಗಿ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಹೊಂದಿದ್ದರೆ ಸಾಕು. * ಐಪಿಪಿಬಿ ಖಾತೆಗಳ ಮೂಲಕ ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ, ಪಿಪಿಎಫ್, RD ಖಾತೆಗಳಿಗೆ ಐಪಿಪಿಬಿ ಮೊಬೈಲ್ ಬ್ಯಾಂಕಿಂಗ್ ಆಪ್ ಮೂಲಕ ಆನ್‍ಲೈನ್‍ನಲ್ಲಿ ಪಾವತಿಸಬಹುದಾಗಿದೆ.