Job Description: ನವದೆಹಲಿ : ಒಡಿಶಾದ ಐತಿಹಾಸಿಕ ಪುರಿ ಜಗನ್ನಾಥ ರಥ ಯಾತ್ರೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿ ತೀರ್ಪು ಪ್ರಕಟಿಸಿದ್ದು, ಕಳೆದ ಜೂನ್ 18ರಂದು ಇದೆ ಸುಪ್ರೀಂ ಕೋರ್ಟ್ ರಥಯಾತ್ರೆಗೆ ನೀಡಿದ್ದ ತಡೆಯನ್ನು ಕೆಲ ನಿರ್ಬಂಧಗಳನ್ನು ವಿಧಿಸುವ ಮೂಲಕ ಆಚರಿಸಲು ಅನುಮತಿ ನೀಡಿದೆ. * ರಥ ಯಾತ್ರೆಯನ್ನು ಆಯೋಜಿಸುವ ನಿರ್ಧಾರವನ್ನು ಒಡಿಶಾ ರಾಜ್ಯ ಸರ್ಕಾರದ ವಿವೇಚನೆಗೆ ಒಳಪಟ್ಟಿದ್ದು, ಪುರಿಯ ಜಗನ್ನಾಥ ಮಂದಿರದಲ್ಲಿ ಮಾತ್ರವೇ ರಥ ಯಾತ್ರೆ ನಡೆಸಲು ಅವಕಾಶ. ಬೇರೆಲ್ಲೂ ರಥಯಾತ್ರೆ ಅನುಮತಿಯಿಲ್ಲ ಎಂದು ಕೋರ್ಟ್ ಆದೇಶಿಸಿದೆ. * ಪುರಿಯಲ್ಲಿ ಎರಡು ತೇರುಗಳಿದ್ದು ಎರಡು ರಥ ಯಾತ್ರೆಗಳು ನಡೆಯುತ್ತವೆ. ಪ್ರತಿಯೊಂದು ರಥ ಯಾತ್ರೆಯಲ್ಲಿ ಭಕ್ತರ ಸಂಖ್ಯೆ 500 ಮೀರುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ. * ಪುರಿ ಮಂದಿರದಲ್ಲಿ ಎರಡು ರಥ ಯಾತ್ರೆ ನಡೆಯಲಿದ್ದು, ಇವುಗಳ ಮಧ್ಯೆ ಕನಿಷ್ಠ 1 ಗಂಟೆ ಅಂತರ ಇರಬೇಕು. * ರಥ ಎಳೆಯಲು ಬರುವ ಪ್ರತಿಯೊಬ್ಬ ಭಕ್ತರಿಗೂ ಕೊರೋನಾ ಪರೀಕ್ಷೆ ನಡೆಸಿಯೇ ಬಿಡಬೇಕು. ಸಾಮಾಜಿಕ ಅಂತರ ಪಾಲನೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.