Job Description: ನವದೆಹಲಿ: ಭಾರತಾದ್ಯಂತ ಜಿಲ್ಲಾ ಮಟ್ಟದಲ್ಲಿ 1000 ಖೇಲೊ ಇಂಡಿಯಾ ಕೇಂದ್ರಗಳನ್ನು (ಕೆಐಸಿ) ಆರಂಭಿಸಲು ಕೇಂದ್ರ ಕ್ರೀಡಾ ಸಚಿವಾಲಯ ಸಿದ್ಧತೆ ನಡೆಸಿದೆ. ಈ ಕೇಂದ್ರಗಳನ್ನು ಆರಂಭಿಸಿ ಇವುಗಳ ನಿರ್ವಹಣೆಯ ಹೊಣೆಯನ್ನು ಕ್ರೀಡಾ ಚಾಂಪಿಯನ್‌ಗಳ ನೆರವು ಪಡೆಯಲು ಇಲಾಖೆ ಚಿಂತನೆ ನಡೆಸಿದೆ. * ಈ ಹಿಂದೆ ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್ ಆದ ಪಟುಗಳು ಈ ಕೇಂದ್ರಗಳನ್ನು ಮುನ್ನಡೆಸಲಿದ್ದಾರೆ ಅಥವಾ ಅವರನ್ನು ಕೋಚ್ ಆಗಿಯೂ ನೇಮಿಸಿಕೊಳ್ಳಲಾಗುತ್ತದೆ. * 'ಭಾರತವನ್ನು ಒಂದು ಕ್ರೀಡಾ ಶಕ್ತಿಯಾಗಿ ರೂಪಿಸಲು ನಾವು ಶ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಯುವಕರಿಗೆ ಕ್ರೀಡೆಯು ವೃತ್ತಿ ಬದುಕಿನ ಉತ್ತಮ ಆಯ್ಕೆಯಾಗಿದೆ ಎಂಬುದನ್ನು ಖಚಿತಪಡಿಸಬೇಕಿದೆ' ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.