Job Description: ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‌ಡೌನ್ ನಿಂದಾಗಿ ತೀವ್ರ ಇಳಿಮುಖ ಕಂಡಿರುವ ಭಾರತದ ಆರ್ಥಿಕತೆ, ಬರುವ ಮುಂದಿನ ಹಣಕಾಸು ವರ್ಷದಲ್ಲಿ (2021-22) ತ್ವರಿತ ಬೆಳವಣಿಗೆ ಕಾಣುವ ನೀರಿಕ್ಷೆಯಿದ್ದು, ಈ ಮೂಲಕ ಶೇ. 9.5 ಕ್ಕೇರಬಹುದೆಂದು ಎಂದು ವಿಶ್ವದ ಪ್ರಮುಖ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಲ್ಲೊಂದಾದ "ಫಿಚ್ ರೇಟಿಂಗ್ಸ್ ಕಂಪೆನಿ" ವರದಿ ಮಾಡಿದೆ. ಫಿಚ್ ರೇಟಿಂಗ್ಸ್ ಕಂಪೆನಿ ಪ್ರಕಟಿಸಿರುವ ಅಪಾಕ್ ಸಾವೆರಿನ್ ಕ್ರೆಡಿಟ್ ಓವರ್‌ವ್ಯೂ ಎಂಬ ವರದಿಯಲ್ಲಿ ಈ ವಿಚಾರನ್ನು ಕಂಪನಿಯು ಉಲ್ಲೇಖೀಸಿದೆ. ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರೀಕ್ಷಿಸಲಾಗಿದ್ದ ಒಟ್ಟು ರಾಷ್ಟ್ರೀಯ ಉತ್ಪನ್ನ (GDP) ಯಲ್ಲಿ ಶೇ. 5ರಷ್ಟು ಇಳಿಮುಖವಾಗಲಿದೆ ಎಂದು ತಿಳಿಸಿದೆ.