Job Description: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ 3.2 ಪರ್ಸೆಂಟ್ ನಷ್ಟು ಕುಗ್ಗಲಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ. ಜಾಗತಿಕವಾಗಿ ವ್ಯಾಪಿಸಿರುವ ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ವಿಧಿಸಿದ ಲಾಕ್ ಡೌನ್ ನಿಂದ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಆಗಲಿದೆ ಎಂದು ಈಗಾಗಲೇ ಹಲವು ಸಂಸ್ಥೆಗಳು ತಿಳಿಸಿದ್ದು, ಇದೆ ವಿಷಯಗಳನ್ನೇ ಈಗ ವಿಶ್ವ ಬ್ಯಾಂಕ್ ಮತ್ತೊಮ್ಮೆ ಹೇಳಿದಂತಾಗಿದೆ. 2017ರಲ್ಲಿ ಭಾರತದ ಆರ್ಥಿಕತೆ ದರವು 7 ಪರ್ಸೆಂಟ್ ಇತ್ತು. ಆ ನಂತರ 2018ರಲ್ಲಿ 6.1 ಪರ್ಸೆಂಟ್ ಗೆ ಇಳಿಯಿತು. 2020ರ ಆರ್ಥಿಕ ವರ್ಷದಲ್ಲಿ 4.2% ಕುಗ್ಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.