Job Description: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರಾಜ್ಯದಲ್ಲಿನ ವಿವಿಧ ನೈಸರ್ಗಿಕ ವಿಕೋಪಗಳ ಕುರಿತು ಉಸ್ತುವಾರಿ ಹಾಗೂ ಜವಾಬ್ದಾರಿಗಳನ್ನು ಹೊಂದಿರುತ್ತದೆ. ಅಲ್ಲದೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳಿಗೆ ವಿಪತ್ತು ನಿರ್ವಹಣೆಗೆ ಕುರಿತ ಎಲ್ಲ ತಂತ್ರಜ್ಞಾನ ಆಧಾರಿತ ತಾಂತ್ರಿಕ ನೆರವನ್ನು ನೀಡುತ್ತಿದೆ. ಪ್ರಸ್ತುತ KSNDMC ಯು ಭಾರತೀಯ ವಿಜ್ಞಾನ ಸಂಸ್ಥೆ (IISc). ಬೆಂಗಳೂರು ಇವರ ಸಹಯೋಗದೊಂದಿಗೆ 'ಬೆಂಗಳೂರು ನಗರ ಪ್ರವಾಹ ನಿರ್ವಹಣೆ ಮಾದರಿ' ಯನ್ನು ಅಭಿವೃದ್ಧಿಪಡಿಸಿದ್ದು. ಈ ಯೋಜನೆಯ ಮೂಲಕ ಬೆಂಗಳೂರು ನಗರದಲ್ಲಿ ಸಂಭವಿಸಬಹುದಾದ ಮಳೆ ಮುನ್ಸೂಚನೆ. ಪ್ರವಾಹ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆಗಳನ್ನು ಪ್ರತಿ ದಿನ ನಗರದ ವಿವಿಧ ಇಲಾಖೆಗಳ ವಲಯವಾರು ಅಧಿಕಾರಿಗಳಿಗೆ ನೀಡಲಗುವದು.