Job Description: ಹೊಸದಿಲ್ಲಿ: ಕಳೆದ ಎಂಟು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು 750 ಹುಲಿಗಳು ಬೇಟೆ, ಪ್ರಾಕೃತಿಕ ಕಾರಣಗಳು, ಅನಾರೋಗ್ಯ ಸೇರಿ ಹಲವು ಕಾರಣಗಳಿಂದಾಗಿ ಮೃತಪಟ್ಟಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆಘಾತಕಾರಿ ಮಾಹಿತಿ ನೀಡಿದೆ. ಹುಲಿಗಳ ಸಾವಿನ ಸಂಖ್ಯೆಯಲ್ಲಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಾಗಿದ್ದು, ಎಂಟು ವರ್ಷಗಳಲ್ಲಿ ಮಧ್ಯಪ್ರದೇಶ ಒಂದರಲ್ಲೇ 173 ಹುಲಿಗಳು ಸಾವಿಗೀಡಾಗಿವೆ. ಕರ್ನಾಟಕದಲ್ಲಿಯೂ ಕೂಡ 111 ಹುಲಿಗಳ ಸಾವನ್ನಪ್ಪಿವೆ, ಈ ಪೈಕಿ 28 ಹುಲಿಗಳು ಬೇಟೆಗಾರರ ಗುಂಡಿಗೆ ಬಲಿಯಾಗಿವೆ. * ಮಹಾರಾಷ್ಟ್ರದಲ್ಲಿ 125, ಉತ್ತರಾಖಂಡದಲ್ಲಿ 88, ತಮಿಳುನಾಡು ಮತ್ತು ಅಸ್ಸಾಂನಲ್ಲಿ ತಲಾ 54, ಕೇರಳ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 35, ರಾಜಸ್ಥಾನದಲ್ಲಿ 17, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 11 ಹಾಗೂ ಛತ್ತೀಸ್‌ಗಡದಲ್ಲಿ 10 ಹುಲಿಗಳು ಸಾವನ್ನಪ್ಪಿವೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.