Job Description: ಹೊಸದಿಲ್ಲಿ : ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ಖೇಲ್‌ರತ್ನ ಪ್ರಶಸ್ತಿಗೆ ಖ್ಯಾತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹೆಸರು ಸೂಚಿಸಿರುವುದಾಗಿ ಆಯತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಅಧಿಕೃತವಾಗಿ ತಿಳಿಸಿದೆ. “ನೀರಜ್ ಚೋಪ್ರಾ ಅವರಿಗೆ ಈ ವರ್ಷ ಖೇಲ್‌ರತ್ನ ಒಲಿಯಲಿದೆ ಎಂಬ ವಿಶ್ವಾಸವಿದ್ದು, 2018ರಲ್ಲಿ ಮೀರಾಬಾಯಿ ಚಾನು ಹಾಗೂ ಕಳೆದ ವರ್ಷ ಭಜರಂಗ್ ಪೂನಿಯಾ ಚೋಪ್ರಾರನ್ನು ಇವರು ಮೀರಿಸಿದ್ದರು’ ಎಂಬುದಾಗಿ ಎಎಫ್‌ಐ ಅಧ್ಯಕ್ಷ ಎ. ಸುಮರಿವಲ್ಲ ತಿಳಿಸಿದ್ದಾರೆ. 22ರ ಹರೆಯದ ನೀರಜ್ ಚೋಪ್ರಾ ಈಗಾಗಲೇ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ (2018). ಅದೇ ವರ್ಷ ಏಶ್ಯನ್ ಗೇಮ್ಸ್‌ನಲ್ಲೂ ಬಂಗಾರ ಜಯಿಸಿ ಖೇಲ್‌ರತ್ನಕ್ಕೆ ನಾಮನಿರ್ದೇಶನಗೊಂಡಿದ್ದರು. ಚೋಪ್ರಾ ಈಗಾಗಲೇ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದಾರೆ.