Job Description: ಹೈನುಗಾರಿಕಾ ರೈತರಿಗೆ ಸಹಾಯ ಮಾಡಲು ಜೂನ್ 2, 2020 ರಂದು ಭಾರತ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಅಭಿಯಾನವನ್ನು ಪ್ರಾರಂಭಿಸಿತು. ಈ ಅಭಿಯಾನದಡಿ ಸುಮಾರು 1.5 ಕೋಟಿ ಹೈನುಗಾರಿಕಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಯೋಜಿಸಲಾಗುವದು. ಈ ಯೋಜನೆಯಡಿ, ಹಾಲು ಉತ್ಪಾದಿಸುವ ಒಕ್ಕೂಟಗಳೊಂದಿಗೆ ವಹಿವಾಟು ನಡೆಸುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಭಾರತ ಸರ್ಕಾರ ನೀಡಲಿದೆ. ಭಾರತದಲ್ಲಿ ಹಾಲು ಒಕ್ಕೂಟದೊಂದಿಗೆ ವ್ಯವಹರಿಸುವ ಸುಮಾರು 1.7 ಕೋಟಿ ರೈತರು ಸಂಬಂಧ ಹೊಂದಿದ್ದಾರೆ. * 1.5 ಕೋಟಿ ಡೈರಿ ರೈತರಿಗೆ ಕಿಸಾನ ಕ್ರೆಡಿಟ್ ಕಾರ್ಡ್ ಗಳನ್ನು ಒದಗಿಸುವ ಈ ಅಭಿಯಾನವು ಲಾಕ್ ಡೌನ್ ಸಮಯದಲ್ಲಿ ಪ್ರಧಾನಿಯವರು ಘೋಷಿಸಿದ "ಆತ್ಮ ನಿರ್ಭಾರ್ ಭಾರತ್ ಅಭಿಯಾನ"ದ ಒಂದು ಭಾಗವಾಗಿದೆ.