Job Description: ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಜೀವನ ಚರಿತ್ರೆ ಬಿಡುಗಡೆ ಗೊಂಡಿದ್ದು, ಈ ಪುಸ್ತಕದಲ್ಲಿ ಮೋದಿಯವರ ಬಾಲ್ಯದ ಅಪರೂಪದ ಚಿತ್ರಗಳ ಸಂಗ್ರಹವನ್ನು ಒಳಗೊಂಡಿದೆ. " ನರೇಂದ್ರ ಮೋದಿ - ಹರ್ಬಿಂಗರ್ ಅಫ್ ಪ್ರಾಸ್ಪರಿಟಿ ಮತ್ತು ಅಸ್ಪಲ್ ಅಫ್ ವರ್ಡ್ ಪೀಸ್" ಎಂದು ಹೆಸರು ಹೊಂದಿದ ಈ ಪುಸ್ತಕವನ್ನು ಅಂತರ್ಜಾಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಬಿಡುಗಡೆ ಮಾಡಿದರು. * ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್ ಅಧ್ಯಕ್ಷ ಆದಿಶ್ ಸಿ ಅಗರ್‌ವಾಲಾ ಮತ್ತು ಅಮೆರಿಕಾದ ಲೇಖಕ ಮತ್ತು ಕವಿ ಎಲಿಸಬೆತ್ ಹೊರಾನ್ ಜಂಟಿಯಾಗಿ ಈ ಪುಸ್ತಕವನ್ನು ಬರೆದಿದ್ದು, ಮೋದಿಯವರ ಆರಂಭಿಕ ಜೀವನದ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡಿದೆ. ಈ ಪುಸ್ತಕವು ವಿದೇಶಿ ಹಾಗೂ ಕನ್ನಡ ಸೇರಿ ಹಲವು ಭಾರತೀಯ ಭಾಷೆಗಳಿಗಲ್ಲಿ ಲಭ್ಯವಿರಲಿದೆ.