Job Description: ವಿಶ್ವದಲ್ಲೇ ಹಾಲು ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನ ಹೊಂದಿದ್ದು, ಕರ್ನಾಟಕದಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ಇವರ ಪೈಕಿ ಸುಮಾರು 25 ಲಕ್ಷ ಜನ ಹೈನುಗಾರಿಕೆಯನ್ನು ಉದ್ಯಮವನ್ನಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಪ್ರತಿವರ್ಷ ಜೂ.1 ರಂದು ಅಂತಾರಾಷ್ಟ್ರೀಯ ಹಾಲು ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ಭಾರತದಲ್ಲಿ 7 ಕೋಟಿಗೂ ಅಧಿಕ ಜನ ಇದರ ಮೇಲೆ ಅವಲಂಬಿತರಾಗಿದ್ದಾರೆ. ಆಹಾರ ಪದ್ಧತಿಯಲ್ಲಿ ಹಾಲಿನ ಸದ್ಬಳಕೆಗೆ ಉತ್ತಮಪಡಿಸಲು ಕ್ರಮಕೈಗೊಳ್ಳುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನಾಗಿ ಆಹಾರ ಮತ್ತು ಕೃಷಿ ಸಂಸ್ಥೆ ಆಚರಿಸಿಕೊಂಡು ಬಂದಿದೆ. ಹಾಗೆಯೇ ವಿಶ್ವದ ನಾನಾ ರಾಷ್ಟ್ರಗಳು ಹಾಲು ದಿನ ಆಚರಿಸುತ್ತಿವೆ. ಜೊತೆಗೆ ರಾಜ್ಯದ ಹಾಲು ಒಕ್ಕೂಟವು ಕೂಡ ಈ ದಿನವನ್ನು ಆಚರಿಸುತ್ತಿದೆ.