Job Description: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾರ್ ಧಾಮ್ ಹೆದ್ದಾರಿ ಅಭಿವೃದ್ಧಿ ಯೋಜನೆಯಾ ಚಂಬಾ ಸುರಂಗದ ಉದ್ಘಾಟಿಸಿದರು. ಚಾರ್ಧಮ್ ಪರಿಯೋಜನೆ : ಚಾರ್ ಧಾಮ್ ಮಾರ್ಗ ವಿಕಾಸ್ ಪರಿಯೋಜನ (ಚಾರ್ ಧಾಮ್ ಹೆದ್ದಾರಿ ಅಭಿವೃದ್ಧಿ ಯೋಜನೆ) ಗೆ ಡಿಸೆಂಬರ್ 27, 2016 ರಂದು ಪ್ರಧಾನಿ ನರೇದ್ರ ಮೋದಿಯವರು ಅಡಿಪಾಯ ಹಾಕಿದರು. ಈ ಯೋಜನೆಯು ಎರಡು ಪಥಗಳ ರಾಷ್ಟ್ರೀಯ ಹೆದ್ದಾರಿಯನ್ನು ಉತ್ತರಾಖಂಡದಲ್ಲಿ ನಿರ್ಮಾಣ ಮಾಡುವ ಗುರಿಹೊಂದಿದ್ದು, ಒಟ್ಟು 12000 ಕೋಟಿ ಮೊತ್ತದ ಯೋಜನೆಯಾಗಿದೆ. * ಚಾರ್ ಧಾಮ್ ಮಾರ್ಗ : ರಿಷಿಕೇಶದಿಂದ ಆರಂಭವಾಗುವ ಚಾರ್ ಧಾಮ್ ಹೆದ್ದಾರಿ ಜಾಲವು ಉತ್ತರಾಖಂಡದ ಬದ್ರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಈ ನಾಲ್ಕು ಪವಿತ್ರ ಸ್ಥಳಗಳನ್ನು ಸಂಪರ್ಕಿಸುತ್ತದೆ.