Job Description: ಬೆಳಗಾವಿ : ಪ್ರಸಿದ್ಧ ಕವಿ ಚೆನ್ನವೀರ ಕಣವಿಯವರ ಪತ್ನಿ, ಹಿರಿಯ ಲೇಖಕಿ ಶಾಂತಾದೇವಿ ಕಣವಿ ಯವರು ತಮ್ಮ 88 ವಯಸ್ಸಿನಲ್ಲಿ ವಿಧಿವಶರಾದರು. ಇವರು ಕಥೆಗಾರ್ತಿ, ಲೇಖಕಿಯಾಗಿ ಹೆಸರಾಗಿದ್ದ ಶಾಂತಾದೇವಿಯವರು ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರದವರು. ಮುಂದೆ ಚೆನ್ನವೀರ ಕಣವಿಯವರನ್ನು ವಿವಾಹವಾಗಿ ಅವರ ಸಾಹಿತ್ಯ ಸೃಷ್ಟಿಗೆ ಸ್ಪೂರ್ತಿಯಾಗಿದ್ದರು. ಶಾಂತಾದೇವಿ ಕಣವಿ ಕಿರು ಪರಿಚಯ : * 1933ರಲ್ಲಿ ವಿಜಯಪುರದಲ್ಲಿ ಜನಿಸಿದ್ದ ಶಾಂತಾದೇವಿ ಕಣವಿ ತಂದೆ ಸಿದ್ದಪ್ಪ, ತಾಯಿ ಭಾಗೀರಥಿದೇವಿ. * ಸಂಜೆಮಲ್ಲಿಗೆ, ಬಯಲು-ಆಲಯ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾತೀರ ಇವು ಶಾಂತಾದೇವಿಯವರ ಕಥಾಸಂಕಲನಗಳು. * ಅಜಗಜಾಂತರ-ಹರಟೆಗಳ ಸಂಗ್ರಹ. ನಿಜಗುಣ ಶಿವಯೋಗಿ ಎಂಬ ಮಕ್ಕಳ ಸಾಹಿತ್ಯ ಸಹ ಪ್ರಕಟಿಸಿದ್ದಾರೆ. * ಬಯಲು-ಆಲಯ ಕಥಾಸಂಕಲನಕ್ಕೆ 1974ರ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತ್ತು. 1987ರಲ್ಲಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಸಹ ಶಾಂತಾದೇವಿ ಭಾಜನರಾಗಿದ್ದರು.