Job Description: ಜಿನಿವಾ (ಸ್ವಿಟ್ಜರ್ಲೆಂಡ್) : ವಿಶ್ವ ಆರೋಗ್ಯ ಸಂಸ್ಥೆ ತನ್ನ ಮೊಟ್ಟಮೊದಲ ವರ್ಚುವಲ್ ಅಸೆಂಬ್ಲಿಯನ್ನು(ವಾಸ್ತವ ಸ್ಥಿತಿಯ ಸಾಮಾನ್ಯ ಸಭೆ) ಆರಂಭಿಸುತ್ತಿದ್ದು. ಕೋರೋಣ ವೈರಸ್ ಚೀನಾ ದೇಶದಿಂದಲೇ ಆರಂಭವಾಗಿದ್ದು, ಹಾಗೂ ವುಹಾನ್ ಸಿಟಿಯಲ್ಲಿ ಮೊದಲ ಪ್ರಕರಣ ಪತ್ತೆಯಾದ ಬಗ್ಗೆ ಜಗತ್ತಿಗೆ ಗೊತ್ತಿರುವ ಸತ್ಯ. ಆದರೆ, ಸ್ವತಃ ಚೀನಾ ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಯಬೇಕೆಂದು ಭಾರತ ಸೇರಿ 100ಕ್ಕೂ ಅಧಿಕ ದೇಶಗಳು ವಿಶ್ವ ಅರೋಗ್ಯ ಸಂಸ್ಥೆಗೆ ಒತ್ತಾಯಿಸಿವೆ. ಚೀನಾ ರಾಷ್ಟ್ರ ಕರೊನಾ ವಿಚಾರವಾಗಿ ನಿಜವಾದ ಸತ್ಯವನ್ನು ಮುಚ್ಚಿಟ್ಟಲ್ಲದೇ, ಅಮೆರಿಕದತ್ತ ಆರೋಪ ಮಾಡಿತ್ತು. ಈ ನಡುವೆ ಅಮೇರಿಕಾ ಕೂಡ ಚೀನಾದ ವೈರಾಣು ಪ್ರಯೋಗಾಲಯದಿಂದಲೇ ಈ ಸೋಂಕು ಸೋರಿಕೆಯಾಗಿದೆ ಎಂದು ಅಮೆರಿಕ ಆರೋಪಿಸಿತ್ತು. ಹೀಗಾಗಿ ಇದರ ಮೂಲದ ಬಗ್ಗೆ ನಿಷ್ಪಕ್ಷಪಾತ, ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಗೆ ಎಲ್ಲ ರಾಷ್ಟ್ರಗಳು ಒತ್ತಾಯಿಸಿವೆ.