Job Description: ಕೊರೊನಾ ವೈರಸ್ ಕಾರಣಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ "ಆತ್ಮ ನಿರ್ಭರ್ ಭಾರತ್" ಯೋಜನೆಯ 2 ನೇ ಭಾಗದ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಣ್ಣ ಪ್ರಮಾಣದ ವ್ಯಾಪಾರಿಗಳಿಗಾಗಿ ರೂಪಿಸಿರುವ ಕೆಲವು ಕ್ರಮಗಳ ಬಗ್ಗೆ ತಿಳಿಸಿದರು. ಮುದ್ರಾ ಯೋಜನೆ ಅಡಿ ಸಾಲ ಪಡೆದ ಸಣ್ಣ ವ್ಯವಹಾರ ನಡೆಸುವವರಿಗೆ ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ಇಂದಾಗಿ ತೀವ್ರ ತೊಂದರೆಯಾಗಿರುವದ ಮನಗಂಡು ಕೇಂದ್ರ ಸರ್ಕಾರವು ಸದ್ಯಕ್ಕೆ ಮುದ್ರಾ ಶಿಶು ಸಾಲವಾಗಿ 1.62 ಲಕ್ಷ ಕೋಟಿ ರುಪಾಯಿ ವಿತರಿಸರಿಸಿದೆ. ಈ ಯೋಜನೆಯಡಿ ಸಾಲ ಪಡೆದು ಯಾರು ಪ್ರಾಮಾಣಿಕವಾಗಿ ಮರುಪಾವತಿ ಮಾಡಿರುವರೋ ಅವರ 12 ತಿಂಗಳ ಬಡ್ಡಿಯಲ್ಲಿ ಶೇಕಡಾ 2 ರಷ್ಟು ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಒಟ್ಟಾರೆ 1500 ಕೋಟಿ ರುಪಾಯಿಯಷ್ಟು ಮೊತ್ತ ಹೊರೆಯಾಗಲಿದೆ * ಮುದ್ರಾ ಯೋಜನೆ : ಈ ಮುದ್ರಾ ಶಿಶು ಯೋಜನೆಯಲ್ಲಿ ವರ್ತಕರು, ವ್ಯಾಪಾರಿಗಳಿಗೆ ಗರಿಷ್ಠ 50 ಸಾವಿರ ರುಪಾಯಿ ತನಕ ಸಾಲ ನೀಡಲಾಗುತ್ತದೆ.