Job Description: SCO (ಶಾಂಘೈ ಸಹಕಾರ ಸಂಸ್ಥೆ)ಯಾ ವಿದೇಶಾಂಗ ಸಚಿವರು ನಡೆಸಿದ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಭಾರತದಿಂದ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಎಸ್ ಜೈಶಂಕರ್ ಭಾಗವಹಿಸಿದರು. ಈ ಸಭೆಯಲ್ಲಿ COVID-19 ಬಿಕ್ಕಟ್ಟು ಮತ್ತು ಅದರಿಂದ ಉಂಟಾದ ಆರ್ಥಿಕ ಪರಿಣಾಮಗಳು ಮತ್ತು ಅದನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು. ಅಫ್ಘಾನಿಸ್ತಾನದ ಪರಿಸ್ಥಿತಿ. 2 ನೇ ಮಹಾಯುದ್ಧದ ಮುಂಬರುವ 75 ನೇ ವಾರ್ಷಿಕೋತ್ಸವ ಮತ್ತು ವಿಶ್ವಸಂಸ್ಥೆಯ 75 ನೇ ವಾರ್ಷಿಕೋತ್ಸವ ಸೇರಿ ವಿವಿಧ ವಿಷಯಗಳ ಕುರಿತು ಸಚಿವರು ಚರ್ಚಿಸಿದರು.