Job Description: ನವದೆಹಲಿ: ಕೋವಿಡ್-19 ಸೋಂಕಿನಿಂದ ಭಾರತದ ಅರ್ಥ ವ್ಯವಸ್ಥೆ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನಲೆ, ಭಾರತದ ಅರ್ಥ ವ್ಯವಸ್ಥೆಗೆ ನವಚೈತನ್ಯ ತುಂಬುವಂತಹ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಕೈಗೊಳ್ಳಲಾದ ಉಪಕ್ರಮಗಳು ಸೇರಿದಂತೆ ಸುಮಾರು ₹20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್ ನೀಡುವದಾಗಿ ಪ್ರಧಾನಿ ಘೋಷಿಸಿದರು. ಇದರಿಂದಾಗಿ ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 10ರಷ್ಟಾಗುತ್ತದೆ ಎಂದು ಅವರು ತಿಳಿಸಿದರು. * ಕಾರ್ಮಿಕರು, ರೈತರು, ಪ್ರಾಮಾಣಿಕ ತೆರಿಗೆ ಪಾವತಿದಾರರು, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಭಾರತೀಯರಿಗೂ ಈ ಪ್ಯಾಕೇಜ್‌ನಲ್ಲಿ ಪಾಲು ಇರುವದಾಗಿ ಪ್ರಧಾನಿ ತಿಳಿಸಿದ್ದಾರೆ. * ದೇಶವ್ಯಾಪಿ ಹೇರಲಾಗಿರುವ ಮೂರನೇ ಹಂತದ ಲಾಕ್‌ಡೌನ್ ಇದೇ 17ಕ್ಕೆ ಕೊನೆಯಾಗಲಿದೆ. ನಂತರ, ನಾಲ್ಕನೇ ಹಂತದ ದಿಗ್ಬಂಧನ ಆರಂಭವಾಗಲಿದ್ದು, ಇದರ ರೂಪರೇಷಗಳನ್ನು ಶೀಘ್ರದಲ್ಲಿ ತಿಳಿಸುವದಾಗಿ ಅವರು ಇದೆ ವೇಳೆ ತಿಳಿಸಿದರು.