Job Description: ನವದೆಹಲಿ : ಭಾರತ ಸರ್ಕಾರದ ಅದೀನದಲ್ಲಿ ಕಾರ್ಯನಿರ್ವಹಿಸುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO) ಯು ಎಲೆಕ್ಟ್ರಾನಿಕ್ ಉಪಕರಣಗಳು, ಕರೆನ್ಸಿ ನೋಟುಗಳು ಸೇರಿದಂತೆ ವಿವಿಧ ವಸ್ತುಗಳ ಮೇಲಿರುವ ವೈರಾಣುಗಳನ್ನು ನಾಶಪಡಿಸಲು ನೂತನ ಉಪಕರಣವೊಂದನ್ನು ಅಭಿವೃದ್ಧಿಪಡಿಸಿದೆ. * ಈ ಉಪಕರಣವು ನೇರಳಾತೀತ ಕಿರಣಗಳ ಮೂಲಕ ವೈರಾಣಗಳನ್ನು ನಾಶಪಡಿಸುತ್ತದೆ. * ಮೊಬೈಲ್ ದೂರವಾಣಿಗಳು, ಐಪ್ಯಾಡ್‌ಗಳು, ಲ್ಯಾಪ್‌ಟಾಪ್‌ಗಳು, ನೋಟುಗಳು, ಚೆಕ್‌ಗಳು, ಚಲನ್‌ಗಳು, ಪಾಸ್‌ಬುಕ್‌ಗಳು, ಪೇಪರ್, ಲಕೋಟೆ ಮುಂತಾದ ವಸ್ತುಗಳಲ್ಲಿರುವ ವೈರಾಣು ನಾಶಕ್ಕೆ ಈ ಉಪಕರಣ ಬಳಸಬಹುದು ಎಂದು ಸಚಿವಾಲಯ ತಿಳಿಸಿದೆ. * ಹೈದರಾಬಾದ್‌ನಲ್ಲಿರುವ DRDOದ ಸಂಶೋಧನಾ ಕೇಂದ್ರ ಇದನ್ನು ಅಭಿವೃದ್ಧಿಪಡಿಸಿದೆ.